ನನ್ನ ನಾನು ಮರೆಯಬಲ್ಲೆ
ನಿನ್ನ ಮಧುರ ನೆನಪಲಿ
ನಿನ್ನ ಮರೆಯಲೆಂತು ನಾನು
ಕಣ್ಣಬಿಂದು ಕದಪಲಿ !
ನಿನ್ನ ಕಣ್ಣ ಚಾಂಚಲ್ಯಕೆ
ನನ್ನೆದೆಯಲಿ ತಾಂಡವ
ಹಸಿವನಿಂಗಿಸಲು ತಂದೆ ನೀ
ಪ್ರೇಮಮಧೂ ಭಾಂಡವ!
ಒಂದು ಕ್ಶಣವೆ ಒಂದು ದಿನವೆ
ನನ್ನ ನಿನ್ನ ಸಂಗತಿ
ನಿನ್ನ ಭಾವವೆನ್ನ ಜೀವ
ಪರಶಿವನಾ ಪ್ರತಿಕ್ರತಿ!
ಎನ್ನ ಸುಡುವ ವಿರಹದುರಿಗೆ
ನಿನ್ನ ಕಂಬನಿ ಕಾಣಿಕೆ
ಬಯಲ ಹುಲ್ಲ ಗರಿಕೆಮೇಲೆ
ಹೊಳೆವ ಇಬ್ಬನಿ ಮಾಲಿಕೆ!
ಸೋಮವಾರ, ಫೆಬ್ರವರಿ 23, 2009
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)